ಕಾಕಿಯ ವಿಗ್ರಹಕ್ಕೆ ಪಕ್ಷ ಮಾಸದ ವಡೆ – ಪಾಯಸ ಸಮರ್ಪಿಸ ಬಹುದೇ, ಅದು ಕಬ್ಬಿಣ ವಿಗ್ರಹವೇ ಆಗಬೇಕೇ ಯಂಬ ಸಂಶಯಗಳಿಗೆ  ಆಧಾರವಿಲ್ಲ. 

ನಗರಗಳಲ್ಲಿ ಧಾರ್ಮಿಕ ಕಾರ್ಯಗಳನ್ನ ನಿರ್ವಹಿಸುವುದು ಕಷ್ಟವಾಗುತ್ತಿರುವ ಕಲಿಯುಗ ದಲ್ಲಿ ಅನ್ಯೋಪಾಯಗಳನ್ನು ಅಳವಡಿಸುಕೊಳ್ಳುವದು ಅನಿವಾರ್ಯವಾಗಿದೆ. ಪಿತೃ ದೇವತಗಳಿಗೆ ನೈವೈದ್ಯ ಕಾಗೆ ಮೂಲಕ ಸಮರ್ಪಿಸುತ್ತೇವೆ. ಆದರೆ, ನಗರಗಳ್ಲಿ ಕಾಗೆಗಳು ಕಾಣುವದು ವಿರಳವಾಗಿದೆ. ಆದ್ದರಿಂದ ಲೋಹ ವಾಯಸ ಮೂರ್ತಿ ರೂಪೇಣ ನಮ್ಮ ಪಿತೃ ಋಣ ಸಲ್ಲಿಸುವುದು ಶಾಸ್ತ್ರ  ಸಮ್ಮತವಾಗಿದೆ.
ಹೇಗಂದರೆ, ತ್ರೇತಾಯುಗದಲ್ಲಿ, ರಾಮ ಬಾಣ ಪೀಡಿತನಾದ ಜಯಂತನ ಅನುಭವದಿಂದ, ಎಲ್ಲ ಕಾಗೆಗಳೂ ಚಿತ್ರಕೂಟವನ್ನ ತೊರೆದವು. ಅಷ್ಟರಲ್ಲಿ, ಪಕ್ಷ ಮಾಸವು ಒದಿಗಿತು. ತಮ್ಮ  ತಂದೆಯ ಪಕ್ಷ ಮಾಸದ ಶ್ರಾದ್ಧ ಸಂಪೂರ್ಣ ಗೊಳಿಸುವದು ಹೇಗೆ ಎಂದು ರಾಮ ಲಕ್ಷ್ಮಣರು   ಚಿಂತಿತರಾದರು. ಧೀಮಂತನಾದ ಲಕ್ಷ್ಮಣನು ಭಂಗಾರದ ಕಾಗೆ ಮೂರ್ತಿಯನ್ನು ನಿರ್ಮಿಸಲುದ್ಯುಕ್ತನಾದನು.
ಆತನನ್ನು ತಡೆಯುತ್ತ ಮಹಾತ್ಮನಾದ ರಾಮನು, “ಎಲೈ ಲಕ್ಷ್ಮಣನೇ, ವನವಾಸ ದೀಕ್ಷೆಯಲ್ಲಿರುವ ನಮಗೆ ಸುವರ್ಣವು ಸೂಕ್ತವಲ್ಲ. ಕಬ್ಬಿಣವೇ ನಮಗೆ  ಶೋಭಿಸುವುದು” ಎಂದನು.  ಆಗ ರಾಮನ ಮುಗುಳ್ನಗೆ ಚಂದ್ರ ಕಿರಣದಂತೆ ಪ್ರಕಾಶಿಸುತು. ಆ ಕಿರಣಗಳಲ್ಲಿ ಮಿಂದು ಪುನೀತನಾದ ಲಕ್ಷ್ಮಣನು, “ಸ್ವಾಮೀ, ನಿನ್ನ ಮಹಿಮೆಯನ್ನರಯುಲು ಯಾರಿಂದ ಸಾಧ್ಯ? ಮಾನವರಿಗೆ ಸದಾಚಾರ ಉಪದೇಶಿಸಲೆಂದೇ ಅವತಾರ ತಾಳಿದ ಜಿಷ್ಣುವೇ  ನೀನು” ಎಂದು ಕೀರ್ತಿಸಿ, ಕಬ್ಬಿಣದಿಂದ ಕಾಗೆ ಮೂರ್ತಿ ನಿರ್ಮಿಸದನು. ಸೀತೆ ಕರೆದ ವಡೆಗಳನ್ನು, ಬೇಯಿಸಿದ ಪಾಯಸವನ್ನು ಆ ಲೋಹ ವಾಯಸಕ್ಕೆ ಅರ್ಪಿಸಿ ರಾಮ ಲಕ್ಷ್ಮಣರು ಧನ್ಯರಾದರು.
ರಾಮನೇ ಪ್ರಮಾಣ ಎಂಬ ವಾಕ್ಯ ದಂತೆ, ನಗರ ನಿವಾಸಿಗಳು ಜೀವಂತ ಕಾಗೆಗಳು ಲಭ್ಯವಾಗದಿದ್ದಲ್ಲಿ, ಲೋಹದ ಕಾಗೆ ಮೂರ್ತಿಗೆ ವಡೆ, ಪಾಯಸ ಸಮರ್ಪಿಸಬಹುದೆಂದು ಸಿದ್ಧಾಂತೀಕರಿಸಲಾಗಿದೆ.
ಈಗ, ಕಬ್ಬಿಣದ ಕಾಗೆಯೇ ಆಗಬೇಕೇ  ಯಂಬ ಪ್ರಶ್ನೆ ಉಳಿಯುವುದು.  “ಕಲೌ ಸಾಧೂನಾಮ್ ಆಭರಣಾಮ್ ಚ ಕೀರೀಟಾನ್ ಶೋಭಯಂತಿ” ಯಂಬ ನ್ಯಾಯದಂತೆ,  ಕಲಿಯುಗದಲ್ಲಿ ಮೌಲ್ಯ ಗಳು ಏರುಪೇರಾಗುವದು ಕಾಲ ನಿರ್ಣಯ. ಆದ್ದರಿಂದ, ಅನುಕೂಲಸ್ಥ ಗೃಹಸ್ಥರು ಶಕ್ತ್ಯಾನುಸಾರ ಭಂಗಾರದಿಂದ, ಸಾಧ್ಯವಾಗದಿದ್ದಲ್ಲಿ ಬೆಳ್ಳಿಯಿಂದ ನಿರ್ಮಿಸಿದ ಕಾಗೆ ಮೂರ್ತಿಗೆ ಭಕ್ಷ್ಯ ಸಮರ್ಪಿಸಬಹುದೆಂದು ಗುರುಗಳು ನಿರ್ಧಸಿದ್ದಾರೆ. ಸಾಮಾನ್ಯರು ರಾಮನೇ ಗತಿಎಂದು ಕಬ್ಬಿಣ ಕಾಗೆ ಬಳಿಸ   ಬಹದು.
ವಿ.ಸೊ : ಅಖಿಲ ಕರ್ನಾಟಕ ಪುರೋಹಿತ ಸಂಘದ ನಿರ್ಣಯದಂತೆ, ಭಂಗಾರದ ಕಾಗೆಗೆ ರು. ೧೦೦/-, ಬೆಳ್ಳಿ ಕಾಗೆಗೆ ರು. ೭೫, ಹಾಗು ಕಬ್ಬಿಣ ವಿಗ್ರಹಕ್ಕೆ ರು. ೫೦/- ದಕ್ಷಿಣೆ ಇರುವುದು. ಜಿ. ಎಸ್ಟಿ ಪ್ರತ್ಯೇಕ. ಕಡಿಮೆ ದಕ್ಷಿಣೆ ಕೊಡ ಬಯುಸುವ ಗೃಹಸ್ಥರಿಗೆ ಪುಣ್ಯ ದಕ್ಕುವದಿಲ್ಲ.
(Humour piece- take it lightly or with a pinch of salt.)
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.